
SMAM ಯೋಜನೆ ಅಡಿಯಲ್ಲಿ ವಿವಿಧ ಮಷೀನರಿಗಳ ಸಬ್ಸಿಡಿ ಯೋಜನೆಯನ್ನು ಜಾರಿಗೆ ತಂದಿದ್ದು 60% ವರೆಗೂ ಈ ಒಂದು ಸಬ್ಸಿಡಿ ಸಿಗುತ್ತಾ ಇದೆ ಈ ಸಬ್ಸಿಡಿ ಯನ್ನು ಪಡೆಯಲು ನೀವು ಅರ್ಹತೆಯನ್ನು ಹೊಂದಿದ್ದೀರಾ ಅಂತ ಪರಿಶೀಲಿಸಿಕೊಳ್ಳಲು ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಅರ್ಹರಿದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದು.
ಈ ಯೋಜನೆಯ ಉದ್ದೇಶ
ಕೃಷಿ ಯಂತ್ರೋಪಕರಣಗಳ ತರಬೇತಿ ಮತ್ತು ಪರೀಕ್ಷಾ ಸಂಸ್ಥೆಗಳಲ್ಲಿ ಗೊತ್ತು ಪಡಿಸಿರುವ ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ವಿತರಿಸುತ್ತಿರುವಂತಹ ಸಬ್ಸಿಡಿ ಯೋಜನೆ ಇದಾಗಿದ್ದು ಯಂತ್ರೋಪಕರಣಗಳನ್ನು ಸಲಕರಣೆಗಳನ್ನ ಹಾಗೆ ಇನ್ನಿತರ ಮಷೀನರಿಗಳನ್ನ ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಬಹುದು ರೈತರಿಗೆ ಕೃಷಿ ಯಂತ್ರೋಪಕರಣ ಖರೀದಿಗೆ ಆರ್ಥಿಕ ಸಹಾಯಧನವನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿರುವಂತದು ಹಾಗೆ ಕೃಷಿಯಲ್ಲಿ ಆಧುನಿಕರಣವನ್ನು ಉತ್ತೇಜಿಸುವಂತಹ ಯೋಜನೆ ಇದಾಗಿರುವಂತದ್ದು.
ಈ ಯೋಜನೆಯ ಪ್ರಯೋಜನಗಳು
ಈ ಯೋಜನೆಯು ಮುಖ್ಯ ಉದ್ದೇಶ ಬಡ ಮತ್ತು ಆರ್ಥಿಕವಾಗಿ ಹಿಂದುಳಿದಿರುವಂತ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವಂತಹ ಹಾಗೆ ಅದಕ್ಕೆ ಸಬ್ಸಿಡಿ ನೀಡುವಂತಹ ಕೇಂದ್ರ ಸರ್ಕಾರದ ಯೋಜನೆ ಇದಾಗಿರುವುದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಮತ್ತು ಕೃಷಿ ವಿದ್ಯುತ್ತು ಲಭ್ಯತೆ ಕಡಿಮೆ ಇರುವ ಪ್ರದೇಶಗಳಿಗೆ ಕೃಷಿ ಯಾಂತ್ರಿಕ ಕಾರಣವಾದ ವ್ಯಾಪ್ತಿಯನ್ನ ಹೆಚ್ಚಿಸುವ ಉದ್ದೇಶವನ್ನು ಇದು ಹೊಂದಿರುವಂತದು
ಸಣ್ಣ ಮತ್ತು ಮಧ್ಯಮ ಭೂ ಹಿಡುವಳಿ ಹೊಂದಿರುವಂತ ವೈಯಕ್ತಿಕ ಮಾಲೀಕತ್ವ ಹೆಚ್ಚಿನ ವೆಚ್ಚದಿಂದ ಉಂಟಾಗುವ ಪ್ರತಿಕೂಲ ಆರ್ಥಿಕತೆಯನ್ನು ತಗ್ಗಿಸುವಂತಹ ನಿಟ್ಟಿನಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿರುವುದು ಹಾಗೆ ಕೇಂದ್ರ ಸರ್ಕಾರದ ಎಸ್ಎಂಎಸ್ ಅಡಿಯಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಖರೀದಿಗೆ 80% ವರೆಗೆ ಸಬ್ಸಿಡಿ ಕೂಡ ಸಿಗುತ್ತಿದೆ ಈ ಯೋಜನೆಯ ಹಲವಾರು ಇನ್ನಷ್ಟು ಪ್ರಯೋಜನಗಳನ್ನು ಪಡೆದುಕೊಂಡಿದೆ
ಈ ಯೋಜನೆಗೆ ಅರ್ಹತೆ
- ಎಲ್ಲಾ ಭೂ ಹಿಡುವಳಿ ರೈತ ಕುಟುಂಬಗಳು ಹಾಗೆ ಸ್ವಾಸಹಾಯ ಗುಂಪುಗಳು ಸಣ್ಣ ರೈತರು ಅರ್ಜಿಯನ್ನು ಸಲ್ಲಿಸಬಹುದು
- ರೈತ ಭಾರತದ ನಿವಾಸಿ ಆಗಿರಬೇಕು
- ಕೇಂದ್ರ ಸರ್ಕಾರದ ಆರ್ಥಿಕ ದುರ್ಬಲವಾಗಿರುವಂತ ರೈತರಿಗೆ
- ಹಿಂದೆ ಯಾವುದೇ ಯೋಜನೆಗೆ ಅರ್ಜಿಯನ್ನು ಸಲ್ಲಿಸಿರಬಾರದು
ಅಗತ್ಯ ದಾಖಲೆಗಳು
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಆಧಾರ್ ಕಾರ್ಡ್
- ಭೂ ದಾಖಲಾತಿ
- ಬ್ಯಾಂಕ್ ಪಾಸ್ ಬುಕ್
- ಜಾತಿ ಪ್ರಮಾಣ ಪತ್ರ ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
- ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ
- ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಕೊನೆದಾಗಿ ಸಬ್ಮಿಟ್ ಕೊಟ್ಟ ನಂತರ
- ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು
ಅರ್ಜಿ ಸಲ್ಲಿಸಿ :- https://agrimachinery.nic.in/Index/Index
ತೀರ್ಮಾನ
ಅಭ್ಯರ್ಥಿಗಳು ಅಧಿಕೃತ ವೆಬಸೈಟ್ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಸಾಮಾನ್ಯ ವರ್ಗಗಳಿಗೆ ವಿಶೇಷ ರಿಯಾಯಿತಿಯನ್ನು ಕೂಡ ಇಲ್ಲಿ ಇರುವಂತದ್ದು ನೀವು ಕೂಡ ರಿಯಾಯಿತಿ ಪಡಿಬೇಕು ಅಂತಂದ್ರೆ ಸೂಕ್ತವಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.