
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ಲಾಟಿನಮ್ ಜುಬಿಲಿ ಆಶಾ ವಿದ್ಯಾರ್ಥಿವೇತನವನ್ನು ಬಿಟ್ಟಿದ್ದು ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ವಿದ್ಯಾರ್ಥಿ ವೇತನದ ಮೊತ್ತ 15,000 ದಿಂದ 20 ಲಕ್ಷದವರೆಗೆ ನೀಡಲಾಗುತ್ತದೆ, ಈ ವಿದ್ಯಾರ್ಥಿ ವೇತನಕ್ಕೆ ಬೇಕಾಗಿರುವ ಅರ್ಹತೆ, ದಾಖಲೆಗಳು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಈ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಈ ಎಲ್ಲ ಮಾಹಿತಿಯನ್ನು ಓದಿಕೊಂಡು ಕೊನೆಯಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಉದ್ದೇಶ
ಭಾರತದಲ್ಲಿ ಅತಿ ದೊಡ್ಡ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳಲ್ಲಿ ಒಂದಾದ ಎಸ್ ಬಿ ಐ ಪ್ಲಾಟಿನಮ್ ಜುಬಿಲಿ ಆಶಾ ವಿದ್ಯಾರ್ಥಿ ವೇತನ 2025 /26 ಎಸ್‌ಬಿಐ ಫೌಂಡೇಶನ್ ವತಿಯಿಂದ ನೀಡಲಾಗುತ್ತಿದೆ ಭಾರತದ ಅತ್ಯಂತ ಕಡಿಮೆ ಆದಾಯ ಹೊಂದಿರುವಂತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಿ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವ ಉದ್ದೇಶವನ್ನ ಈ ವಿದ್ಯಾರ್ಥಿ ವೇತನ ಹೊಂದಿದ್ದು 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಎಸ್‌ಬಿಐ ಫೌಂಡೇಶನ್ ಬಗ್ಗೆ
ಎಸ್‌ಬಿಐ ಫೌಂಡೇಶನ್ ನನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2018ರಲ್ಲಿ ಕಂಪನಿ ಕಾಯ್ದೆ 2013ರಲ್ಲಿ ಸ್ಥಾಪನೆ ಮಾಡಲಾಯಿತು, ಎಸ್‌ಬಿಐ ಅದರ ಅಂಗಸಂಸ್ಥೆಗಳ ಸಿಎಸ್ಆರ್ ಚಟುವಟಿಕೆಗಳನ್ನ ಯೋಜಿತ ಮತ್ತು ಕೇಂದ್ರಿತಾ ರೀತಿಯಲ್ಲಿ ಕೈಗೊಳ್ಳಲು ಸಹಾಯ ಮಾಡುತ್ತದೆ.
ಎಸ್ ಬಿ ಐ ಪ್ಲಾಟಿನಮ್ ಜಿಬ್ಲಿ ಆಶಾ ವಿದ್ಯಾರ್ಥಿ ವೇತನದ ಅರ್ಹತೆ,
ಭಾರತೀಯ ನಾಗರಿಕರಾಗಿರಬೇಕು
ಅರ್ಜಿದಾರರು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 9ರಿಂದ 12ನೇ ತರಗತಿಯಲ್ಲಿ ಓದುತ್ತಿರಬೇಕು
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ 75% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು
ಅರ್ಜಿದಾರರ ಕುಟುಂಬದ ಒಟ್ಟು ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು
ಪ್ರಯೋಜನಗಳು
15000 ವರೆಗಿನ ವಿದ್ಯಾರ್ಥಿವೇತನ ನಿಯಮಗಳು ಮತ್ತು ಶರತುಗಳನ್ನು ಅನ್ವಯಿಸುತ್ತವೆ ವಿದ್ಯಾರ್ಥಿಗಳಿಗೆ 20 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತೆ
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
- ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ
- ಸರ್ಕಾರ ನೀಡಿರುವ ಗುರುತಿನ ಚೀಟಿ
- ಪ್ರಸ್ತುತ ವರ್ಷದ ಶುಲ್ಕ ರಶೀದಿ
- ಪ್ರಸ್ತುತ ವರ್ಷದ ಪ್ರವೇಶದ ಪುರಾವೆ
- ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ವಿವರ
- ಸರ್ಕಾರಿ ಪ್ರಾಧಿಕಾರದಿಂದ ಆದಾಯ ಪ್ರಮಾಣ ಪತ್ರ
- ಅರ್ಜಿದಾರರ ಭಾವಚಿತ್ರ ಜಾತಿ ಪ್ರಮಾಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
- ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ
- ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
- ನಂತರ ಅರ್ಜಿ ಪ್ರಕ್ರಿಯೆ ಸಬ್ಮಿಟ್ ಬಟನ್ ಒತ್ತಿ
- ಕೊನೆಯದಾಗಿ ಪ್ರಿಂಟ್ ಔಟ್ ಅನ್ನು ತೆಗೆದಿಟ್ಟುಕೊಳ್ಳಿ
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ :- https://sbifoundation.in/home
ಹೆಚ್ಚಿನ ಮಾಹಿತಿಗೆ
011-430-92248 (Ext- 303) (Monday to Friday – 10:00AM to 06:00 PM (IST))
[email protected]