ಪರಿಚಯ
ಕರ್ನಾಟಕ ಸರ್ಕಾರ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಲು ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು ಯಾರೆಲ್ಲಾ ಅನಧಿಕೃತವಾಗಿ ಬಿಪಿಎಲ್ ಕಾರ್ಡನ್ನು ಪಡೆದುಕೊಂಡಿದ್ದೀರಾ ನಿಮಗೆ ಈ ಒಂದು ಶಾಕ್ ತಟ್ಟಲಿದೆ ಹೌದು ಈ ಒಂದು ಬಿಪಿಎಲ್ ಕಾರ್ಡನ್ನ ಸರ್ಕಾರ ರದ್ದುಗೊಳಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಿಸುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರಲಿದೆ

ಪಡಿತರ ಕಾರ್ಡ್ ರದ್ದು ಗೊಳಿಸುವುದರ ಹಿಂದಿನ ಉದ್ದೇಶ
ಈ ಯೋಜನೆಯ ಉದ್ದೇಶ ಏನು ಅಂದ್ರೆ ಸಾಕಷ್ಟು ಜನ ಅನಧಿಕೃತವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡಿದ್ದು ಅರ್ಹ ವ್ಯಕ್ತಿಗಳಿಗೆ ಸಿಗಬೇಕಾದ ಸೂಕ್ತ ಲಾಭ ಸಿಗದಿರುವ ಕಾರಣದಿಂದಾಗಿ ಹಾಗೂ ಸರ್ಕಾರದ ವಿವಿಧ ಯೋಜನೆಗಳು ಅರ್ಹ ವ್ಯಕ್ತಿಗಳಿಗೆ ಸರಿಯಾಗಿ ಸಿಗುತ್ತಿಲ್ಲ ಅನ್ನುವ ಉದ್ದೇಶದಿಂದ ಅಷ್ಟೇ ಅಲ್ಲದೆ ಇನ್ನಿತರ ಸಾಕಷ್ಟು ಯೋಜನೆಗಳ ಲಾಭವನ್ನು ಅರ್ಹರು ಕೂಡ ಪಡಿತಾ ಇರುವಂತ ಒಂದು ಮಾಹಿತಿಯಿಂದ ಇಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡು ಜಾರಿಗೆ ತರಲು ಸರ್ಕಾರ ಜಾರಿಗೆ ತರಲು ಮುಂದಾಗಿದೆ.
ಪಡಿತರ ಚೀಟಿ ರದ್ದುಗೊಳಿಸುವ ಮೊದಲು ಕೇಳಲಾಗುವ ದಾಖಲೆಗಳು
- ಪಡಿತರ ಚೀಟಿಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ
- ಪಟ್ಟಿಯಲ್ಲಿರುವ ಪಡಿತರ ಚೀಟಿದರ ಪ್ಯಾನ್ ಕಾರ್ಡ್ ಜೆರಾಕ್ಸ್ ಪ್ರತಿ
- ಪಡಿತರ ಚೀಟಿಯಲ್ಲಿರುವ ಸದಸ್ಯರ ಆದಾಯ ಪ್ರಮಾಣ ಪತ್ರ
- ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಬಾಡಿಗೆ ಮನೆಯ ಕರಾರು ಪತ್ರ ಜೆರಾಕ್ಸ್ ಪ್ರತಿ
- ಸ್ವಂತ ಮನೆಯಲ್ಲಿ ವಾಸವಿದ್ದರೆ ಸ್ವಂತ ಮನೆಯ ಪತ್ರದ ಜೆರಾಕ್ಸ್ ಪ್ರತಿ
- ಪಡಿತರ ಚೀಟಿಗರ ನೌಕರಿಯ ಬಗ್ಗೆ ಮಾಹಿತಿ
- ಪಡಿತರ ಚೀಟಿದರ ಎರಡು ಮೊಬೈಲ್ ಸಂಖ್ಯೆ ಸಂಗ್ರಹಿಸುವುದು
ಈ ಎಲ್ಲ ಮಾಹಿತಿಯನ್ನು ಅಂಗಡಿ ಮಾಲೀಕರಿಗೆ ನೀಡಲಾಗಿರುವಂಥದ್ದು ಮುಂದಿನ ದಿನಗಳಲ್ಲಿ ಎಲ್ಲಾ ಅನರ್ಹ ಕಾರ್ಡುಗಳನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿರುವಂತದ್ದು.
ಹೊಸ ಅರ್ಜಿ ಸಲ್ಲಿಸಲು ಅರ್ಹತೆ
- ಬಡತನ ರೇಖೆಗಿಂತ ಕೆಳಗಿರಬೇಕು ಆರ್ಥಿಕವಾಗಿ ಹಿಂದುಳಿದಿರಬೇಕು
- ಕರ್ನಾಟಕದ ನಾಗರಿಕರಾಗಿರಬೇಕು
- ಇನ್ನಿತರ ಮಾನದಂಡಗಳನ್ನು ಹೊಂದಿರುವ ಅಭ್ಯರ್ಥಿಗಳು ಬಿಪಿಎಲ್ ಕಾರ್ಡು ಪಡೆಯಲು ಅರ್ಹತೆಯನ್ನು ಪಡೆಯುತ್ತಾರೆ
ಹೊಸ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವೋಟರ್ ಐಡಿ
- ಪಹಣಿ
ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಹೊಸ ಅರ್ಜಿ ಸಲ್ಲಿಸುವ ವಿಧಾನ
ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇನ್ನೂ ಆನ್ಲೈನ್ ಮುಖಾಂತರ ಅರ್ಜಿಯನ್ನು ಬಿಟ್ಟಿಲ್ಲ ಪ್ರಸ್ತುತ ಇರುವಂತ ಬಿಪಿಎಲ್ ಕಾರ್ಡನ್ನು ಪರಿಷ್ಕರಿಸಿ ಅರ್ಹ ವ್ಯಕ್ತಿಗಳಿಗೆ ಅದರ ಲಾಭವನ್ನ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಅನಹರ್ಹ ವ್ಯಕ್ತಿಯ ಕಾರ್ಡನ್ನ ರದ್ದುಗೊಳಿಸಿ ಅರ್ಹ ವ್ಯಕ್ತಿಗಳಿಗೆ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ ಮುಂದಿನ ದಿನಗಳಲ್ಲಿ ಹೊಸ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಿಡುವ ಸಾಧ್ಯತೆ ಇದೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
- ಹೊಸ ಬಿಪಿಎಲ್ ಕಾಡಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ದಾಖಲೆಗಳನ್ನು ಲಗತಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ
ತೀರ್ಮಾನ
ಕರ್ನಾಟಕ ಸರ್ಕಾರ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಅನರ್ಹ ಕಾರ್ಡುದಾರರನ್ನು ಪತ್ತೆ ಹಚ್ಚಿ ಅವರಿಗೆ ನೋಟಿಸ್ ಜಾರಿ ಮಾಡಿ ತದನಂತರ ಅವರ ಬಳಿ ಇರುವ ದಾಖಲೆಗಳನ್ನ ಪರಿಶೀಲಿಸಿ ನಂತರ ಅವರ ಕಾರ್ಡುಗಳನ್ನು ವಜಗೊಳಿಸಲು ಮುಂದಾಗಿದ್ದಾರೆ.