ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ :- ಪವರ್ ಗ್ರಿಡ್ ನಲ್ಲಿ ಭರ್ಜರಿ ನೇಮಕಾತಿ ನಡಿಯುತ್ತಿದ್ದು ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ₹1,20,000 ಲಕ್ಷದ ವರೆಗೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಈ ಹುದ್ದೆಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂತ ಹಂತವಾಗಿ ನೀಡಲಾಗಿದೆ…..
ಪವರ್ ಗ್ರಿಡ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಒಟ್ಟು 1543 ಹುದ್ದೆಗಳಿಗೆ ನೇಮಕಾತಿ, ಫೀಲ್ಡ್ ಇಂಜಿನಿಯರ್ ಮತ್ತು ಸೂಪರ್‌ವೈಸರ್ ಹುದ್ದೆಗಳು ಈ ಹುದ್ದೆಗಳಿಗೆ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಹುದ್ದೆಗಳನ್ನು ವಿಂಗಡಿಸಲಾಗಿದ್ದು ಅಧಿಸೂಚನೆಯಲ್ಲಿ ಗಮನಿಸಬಹುದು ಅಧಿಕೃತ ಅಧಿಸೂಚನೆಯನ್ನು ಕೆಳಗೆ ಕೊಟ್ಟಿದ್ದು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಎಲ್ಲ ಮಾಹಿತಿಯನ್ನು ಓದಿಕೊಳ್ಳಿ.
ಈ ವಿವಿಧ ಹುದ್ದೆಗಳಿಗೆ ವಿದ್ಯಾರ್ಹತೆ ಬಗ್ಗೆ ನೋಡೋದಾದ್ರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ವಿದ್ಯುತ್ / ಸಿವಿಲ್ ಇಂಜಿನಿಯರಿಂಗ್ ನಲ್ಲಿ BE/B.Tech/B.Sc ಪದವಿ ಪಡೆದಿರುವ ಅಭ್ಯರ್ಥಿಗಳು ಫೀಲ್ಡ್ ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಸೂಪ್ರವೈಸರ್ ಹುದ್ದೆಗಳಿಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಎಂಜಿನಿಯರಿಂಗ್ ಪದವಿಯನ್ನು ಕನಿಷ್ಠ 55% ಗಿಂತ ಕಡಿಮೆ ಇಲ್ಲದಂತೆ ಅಂಕವನ್ನು ಗಳಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗಳಿಗೆ ವಯೋಮಿತಿ ವಿವರ ನಿಗದಿಪಡಿಸಲಾಗಿದ್ದು ಗರಿಷ್ಠ 29 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ ಇದಕ್ಕೆ ಅಧಿಸೂಚನೆಯಲ್ಲಿ ತಿಳಿಸಿರುವ ಹಾಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಫೀಲ್ಡ್ ಇಂಜಿನಿಯರ್ ಹುದ್ದೆಗಳಿಗೆ ₹400 ಅರ್ಜಿಶುಲ್ಕ ಹಾಗೂ ಫೀಲ್ಡ್ ಸೂಪ್ರವೈಸರ್ ಹುದ್ದೆಗಳಿಗೆ ₹300 ರೂ ಅರ್ಜಿ ಶುಲ್ಕವನ್ನು ನಿಗದಿ ಪಡಿಸಲಾಗಿದೆ ಈ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ವೇತನ ಶ್ರೇಣಿ ಹೀಗಿದೆ ಫೀಲ್ಡ್ ಇಂಜಿನಿಯರ್ ಹುದ್ದೆಗಳಿಗೆ ₹ 30,000-3%-1,20,000/- ವೇತನ ಶ್ರೇಣಿ ಇರಲಿದ್ದು ಇದರ ಜೊತೆಗೆ ಇತರ ಭತ್ಯೆಗಳು ಸಿಗುತ್ತವೆ.
ಫೀಲ್ಡ್ ಸೂಪ್ರವೈಸರ್ ಹುದ್ದೆಗಳಿಗೆ ₹ 23,000-3%-1,05,000/-ವೇತನ ಸಿಗಲಿದ್ದು ಇದಕ್ಕೆ ಇನ್ನಿತರ ಭತ್ಯೆ ಗಳು ಸಿಗಲಿದೆ.
ಬಿಸಿಸಿ ಬ್ಯಾಂಕ್ ನೇಮಕಾತಿ 2025 – 74 ಜೂನಿಯರ್ ಅಸಿಸ್ಟೆಂಟ್, ಅಟೆಂಡರ್ ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ
ಕೊನೆಯದಾಗಿ ಆಯ್ಕೆ ಪ್ರಕ್ರಿಯೆನ್ನು ಲಿಖಿತ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಪ್ರಕ್ರಿಯೆ ನಡಿಯಲಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಧಿಕೃತ ಅಧಿಸೂಚನೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ನಂತರ ಅಂತಿಮ ದಾಖಲೆಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಅಧಿಕೃತ ಅಧಿಸೂಚನೆ ಲಿಂಕ್ :-