ಯೋಜನೆಯ ಉದ್ದೇಶ :-
ಈ ಒಂದು ಯೋಜನೆಯಿಂದ ಹಾಲು ಮಾರಾಟ ಮಾಡುವ ರೈತರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಹಾಲನ್ನು ಕರೆಯಲು ಹಾಗೂ ಸ್ವಚ್ಛವಾಗಿ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಹಾಗೂ ಸಮಯ ಉಳಿತಾಯ ಮಾಡಿಕೊಂಡು ಅದರ ಜೊತೆಗೆ ಬೇರೆ ಕೆಲಸವನ್ನು ಮಾಡಿಕೊಂಡು ಕೂಡ ಈ ಹಾಲು ಕರೆಯುವ ಮಷೀನ್ ಮೂಲಕ ಇನ್ನಷ್ಟು ಪಶು ಸಂಗೋಪನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ.
- ಯೋಜನೆ ಹೆಸರು :- ಹಾಲು ಕರೆಯುವ ಯಂತ್ರ ಸಬ್ಸಿಡಿ /ಉಚಿತ
- ಅರ್ಹತೆ :- 2 ಹಸು ಹೊಂದಿದ ರೈತ
- ಅರ್ಜಿ ಪ್ರಕ್ರಿಯೆ :- ಆನ್ಲೈನ್
ಯೋಜನೆಯ ಪ್ರಯೋಜನಗಳು:-
ಹೈನುಗಾರಿಕೆ ಮಾಡುತ್ತಿರುವಂತಹ ರೈತರಿಗೆ ಉಚಿತವಾಗಿ ಹಾಲು ಕರೆಯುವ ಯಂತ್ರವನ್ನು ಕೊಡುವ ಉದ್ದೇಶದಿಂದ ಕೊಡುವುದರಿಂದ ಹಲವಾರು ಪ್ರಯೋಜನಗಳು ನೋಡಬಹುದು ಮೊದಲನೇದಾಗಿ ಹಾಲು ಹೆಚ್ಚು ಮಾರಾಟ ಮಾಡುವ ರೈತರಿಗೆ ಈ ಒಂದು ಮಷೀನ್ ಮೂಲಕ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಕಡಿಮೆ ಸಮಯದಲ್ಲಿ ಹೆಚ್ಚು ಪರಿಶುದ್ಧತೆಯನ್ನು ಕಾಪಾಡಿಕೊಂಡು ಹೆಚ್ಚು ಹಾಲನ್ನು ಕರೆಯಲು ಸಹಾಯವಾಗುತ್ತದೆ ಅಷ್ಟೇ ಅಲ್ಲದೆ ಸಮಯ ಶ್ರಮ ಲೇಬರ್ ಇವೆಲ್ಲವೂ ಕೂಡ ಉಳಿತಾಯವಾಗುತ್ತದೆ ಇದರ ಜೊತೆಗೆ ಇನ್ನಷ್ಟು ಹೆಚ್ಚು ಧನ ಸಾಕಾಣಿಕೆ ಮಾಡಿ ಪಶು ಸಂಗೋಪನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಬಹುದು.
ಯೋಜನೆಗೆ ಅರ್ಹತೆ :-
ಈ ಯೋಜನೆಗೆ 2 ಕಿಂತ ಹೆಚ್ಚು ಹಸುವನ್ನು ಹೊಂದಿರುವ ರೈತರು ಅರ್ಜಿಯನ್ನು ಸಲ್ಲಿಸಬಹುದು ಹಾಗೂ
ಪಶುಪಾಲನ ಇಲಾಖೆಯಿಂದ ಪ್ರಮಾಣ ಪತ್ರವನ್ನು ಹೊಂದಿರಬೇಕು.
ಇದುವರೆಗೆ ಯಾವುದೇ ಸರ್ಕಾರಿ ಯೋಜನೆ ಪಡೆದಿರಬಾರದು
ವರ್ಷ 1 ಲಕ್ಷದ ಒಳಗೆ ಆದಾಯ ಇರಬೇಕು
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು :-
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಪ್ಯಾನ್ ಕಾರ್ಡ್
- ಓಟರ್ ಐಡಿ
- ಆದಾಯ ಪ್ರಮಾಣ ಪತ್ರ
- ಪಶುಪಾಲನಾ ಇಲಾಖೆ ಇಂದ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ :-
- ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಎಲ್ಲ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು
- ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಪ್ಪದೇ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ
- ಅಧಿಕೃತ ವೆಬ್ಸೈಟ್ನಲ್ಲಿ ಕೊಟ್ಟಿರುವ ವಿವಿಧ ಹಂತಗಳನ್ನು ಫಾಲೋ ಮಾಡಿ ಅಲ್ಲಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಮಾಹಿತಿಯನ್ನು ಭರ್ತಿ ಮಾಡಿ
- ಸಬ್ಮಿಟ್ ಕೊಟ್ಟ ನಂತರ ಅರ್ಜಿ ಕಾಪಿಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದುಕೊಳ್ಳಿ
ತೀರ್ಮಾನ :-
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ತಪ್ಪದೆ ನಮೂದಿಸಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
