ಹೈನುಗಾರಿಕೆ ಮಾಡಲು (ಪಶು ಸಂಗೋಪನೆ ಮಾಡಲು) ನಿಮಗೆ ಸರ್ಕಾರದಿಂದ 1.25 ಲಕ್ಷ ಸಹಾಯಧನ ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಬ್ಯಾಂಕ್ ಗಳಿಂದ ಸಾಲ ಪಡೆದು ಜಾನುವಾರು ಘಟಕಗಳನ್ನು ಸ್ಥಾಪಿಸಿ ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಹೆಚ್ಚಿನ ಸಹಾಯಧನ ದೊರೆಯುತ್ತೆ ಯೋಜನೆಯ ವಿವರಗಳು ಹಾಗೆ ಇದಕ್ಕೆ ಸಂಬಂಧಪಟ್ಟಂತ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸೇರಿಸಬಹುದು.

- ನಿರುದ್ಯೋಗಿ ಯುವಕ ಯುವತಿಯರಿಗೆ ಜೀವನೋಪಾಯಕ್ಕಾಗಿ ಅವಕಾಶವನ್ನು ಸೃಷ್ಟಿಸುವಂಥದ್ದು
- ಜಾನುವಾರುಗಳ ಸಾಕಾಣಿಕೆಯನ್ನ ಹೆಚ್ಚಾಗಿ ಮಾಡಿ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ರೈತರಿಗೆ ಸಹಾಯಧನವನ್ನು ಒದಗಿಸುವಂಥದ್ದು
- ಹಾಲು ಉತ್ಪಾದನೆಯನ್ನು ಹೆಚ್ಚಿಸಿ ಪೌಷ್ಟಿಕಾಂಶದ ಭದ್ರತೆಯನ್ನು ಒದಗಿಸುವುದು
- ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು
ಯೋಜನೆಗೆ ಅರ್ಹತೆ
ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಅಥವಾ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಯಾಗಿದ್ದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಸಮಾಜ ಕಲ್ಯಾಣ ಇಲಾಖೆಯ ಅಂಗವಾದ ಅನುಸೂಚಿತ ಜಾತಿ ವರ್ಗದ ನಿಯಮಗಳ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ
ಈ ಮೊದಲು ಸರ್ಕಾರದಿಂದ ಯಾವುದೇ ಸಹಾಯಧನ ಅಥವಾ ಪ್ರಯೋಜನವನ್ನು ಪಡೆದಿರಬಾರದು
ಅವರ ಕುಟುಂಬದ ಸದಸ್ಯರು ಸರ್ಕಾರಿ ಅಥವಾ ಅರೆ ಸರಕಾರಿ ನೌಕರರಿಗೆ ನೌಕರಿಯಲ್ಲಿ ಇರಬಾರದು
ಯೋಜನೆಯ ಮೊತ್ತ
ಸಹಾಯಧನ ಎರಡು ಹಸು ಹೆಮ್ಮೆ ಖರೀದಿಗೆ ಗರಿಷ್ಠ 1.25 ಲಕ್ಷ ಅಥವಾ ಒಟ್ಟು ವೆಚ್ಚದ 50% ಎರಡರಲ್ಲಿ ಯಾವುದು ಕಡಿಮೆ ಅದನ್ನ ನೀಡಲಾಗುತ್ತೆ
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ವಾಸ ಸ್ಥಳ ದೃಡೀಕರಣ
- ಪತ್ರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ವ್ಯವಸಾಯ ಜಮೀನು ದಾಖಲೆ
- ಪಶು ಪಾಲನೆಯಿಂದ ಶಿಫಾರಸು ಪತ್ರ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿಯನ್ನು ಸಲ್ಲಿಸಲು ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ
ಸೇವಾಸಿಂದು ಪೋರ್ಟಲ್ಲಿಗೆ ಭೇಟಿ ನೀಡಿ ಅಪ್ಲಿಕೇಶನ್ ನನ್ನ ಓಪನ್ ಮಾಡಿ
ಅಲ್ಲಿ ಕೆಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ
ನಿಮ್ಮ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಥವಾ ಪಶು ಪಾಲನೆ ಇಲಾಖೆಯ ಕಚೇರಿಗೆ ಸಂಪರ್ಕಿಸಿ
ಲಿಂಕ್ :- https://swd.karnataka.gov.in/