ನಮಸ್ಕಾರ ಸ್ನೇಹಿತರೆ,,,ಈ ಲೇಖನದಲ್ಲಿ ಪ್ರತಿಯೊಬ್ಬರಿಗೂ ಉಪಯೋಗವಾಗುವ ಮಾಹಿತಿಯನ್ನು ತಿಳಿಸಿ ಕೊಡ್ತಾ ಹೋಗ್ತೀನಿ. ಸರ್ಕಾರ ದಿಂದ 2025- 26ನೇ ಸಾಲಿನಲ್ಲಿ ಯುವಕ ಮತ್ತು ಯುವತಿಯರಿಗೆ ಉಚಿತ ಹೊಲಿಗೆ ಯಂತ್ರವನ್ನು ಕೊಡುತ್ತಿದ್ದಾರೆ ಈ ಯೋಜನೆಗೆ ಮದುವೆ ಆಗಿರುವಂತವರು ಕೂಡ ಅರ್ಜಿಯನ್ನು ಹಾಕಬಹುದು ಜಿಲ್ಲಾ ಉದ್ಯಮ ಕೇಂದ್ರ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಗ್ರಾಮೀಣ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮಹಿಳೆಯರಿಗೆ ಹಾಗೆ ಪುರುಷರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ನವೆಂಬರ್ 30 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಾಗಿರುತ್ತದೆ.
ಈ ಯೋಜನೆಗೆ ಈಗಾಗಲೇ ಅಪ್ಲಿಕೇಶನ್ ಸ್ಟಾರ್ಟ್ ಆಗಿದೆ ಕೆಲವೇ ಜನ ಮಾತ್ರ ಅಪ್ಲಿಕೇಶನ್ ಹಾಕಿದ್ದಾರೆ ತುಂಬಾ ಜನಕ್ಕೆ ಉಚಿತ ಹೊಲಿಗೆ ಯಂತ್ರ ಸರ್ಕಾರದಿಂದ ಸಿಕ್ಕಿದೆ ಅನ್ನುವ ಮಾಹಿತಿ ಇನ್ನು ಕೂಡ ಗೊತ್ತಿಲ್ಲ
ಕೆಳಗಿನ ಹಂತದಲ್ಲಿ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿಗಳು ಕೇಳಲಾಗುತ್ತೆ ಹಾಗೆ ವಯೋಮಿತಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇನೆ.

ಸದ್ಯಕ್ಕೆ ಕೆಲವೇ ಜಿಲ್ಲೆಯಲ್ಲಿ ಯುವಕ ಯುವತಿಯರಿಗೆ ಮಾತ್ರ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಪ್ರಾರಂಭವಾಗಿರುವಂಥದ್ದು
ಸಂಕ್ಷಿಪ್ತ ಮಾಹಿತಿ:
2025 26ನೇ ಸಾಲಿನ ಜಿಲ್ಲಾ ವಲಯ ಯೋಜನೆ ಅಡಿ ಗ್ರಾಮೀಣ ಭಾಗದ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್ ಒಲಿಗೆ ಯಂತ್ರ ಬಡಗಿತನ, ಗೌಂಡಿ, ಕಮ್ಮಾರಿಕೆ, ಕ್ಷೌರಿಕ, ಮತ್ತು ದೋಬಿ ಸುಧಾರಿತ ಉಪಕರಣಗಳನ್ನು ನೀಡಲು Dharwad.nic.in ವೆಬ್ಸೈಟ್ನಲ್ಲಿ ದಿನಾಂಕ 30/ 09/2025 ರಿಂದ 30/ 11/2025 ವರೆಗೆ ಆನ್ಲೈನಲ್ಲಿ ಅರ್ಜಿಯನ್ನ ಆಹ್ವಾನಿಸಿದ್ದು ದಾರವಾಡ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಭಾಗದ ಕುಶಲಕರ್ಮಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಅಗತ್ಯ ದಾಖಲೆಗಳು
1. ಫೋಟೋ
2. ಜಾತಿ ಪ್ರಮಾಣ ಪತ್ರ
3. ರೇಷನ್ ಕಾರ್ಡ್
4. ಆದಾಯ ಪ್ರಮಾಣ ಪತ್ರ
5. ಗ್ರಾಮ ಪಂಚಾಯಿತಿಯಿಂದ ಗ್ರಾಮಸಭೆಯಲ್ಲಿ ಆಯ್ಕೆ ಮಾಡಿರುವ ಕುರಿತು ದೃಢೀಕರಣ ಪತ್ರ
6. ವಿದ್ಯಾರ್ಹತೆ (ಅನ್ವಯವಾದಲ್ಲಿ)
7. ತೃತಿಯ ಲಿಂಗ (ಮಂಗಳಮುಖಿ)
8.ಮತದಾರರ ಗುರುತಿನ ಚೀಟಿ
ಇನ್ನಿತರ ಸಂಬಂಧಿಸಿದ ಅಗತ್ಯ ದಾಖಲೆಗಳು
Lorem ipsum dolor sit amet...
ವಯೋಮಿತಿ ವಿವರ
- ಇತರೆ ವರ್ಗದ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಗರಿಷ್ಟ 35 ವರ್ಷದ ಒಳಗೆ ಇರುವ ಮಹಿಳೆಯರು ಪುರುಷರು ಅರ್ಜಿ ಹಾಕಬಹುದಾಗಿದೆ
- SE/ST ವಿದ್ಯಾರ್ಥಿಗಳು 18 ವರ್ಷದಿಂದ 38 ವರ್ಷದ ಒಳಗಿನವರು ಅರ್ಜಿ ಹಾಕಬಹುದಾಗಿದೆ. ಇವರಿಗೆ ಮಾತ್ರ ವಯೋಮಿತಿ ಸಡಿಲಿಕೆಯನ್ನ ಸರ್ಕಾರ ಕೊಟ್ಟಿರುವಂಥದ್ದು
ಅರ್ಜಿ ಸಲ್ಲಿಸುವ ಕ್ರಮ :
ಮೊದಲು ನಾವು ಕೆಳಗೆ ಕೊಟ್ಟಿರುವ ಲಿಂಕನ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಕೆಲವೊಂದು ಹಂತಗಳನ್ನು ಅನುಸರಿಸಬೇಕಾಗುತ್ತೆ
ಅರ್ಜಿ ಸಲ್ಲಿಸುವ ಜಿಲ್ಲೆಯ ಹೆಸರು, ಯೋಜನೆಯ ಹೆಸರು,ತಾಲೂಕ ಹೆಸರು, ಹಾಗೆ ಅರ್ಜಿದಾರರ ಹೆಸರು,ತಂದೆ ತಾಯಿ ಅಥವಾ ಗಂಡನ ಹೆಸರು, ಅರ್ಜಿ ದಾರದಗ್ರಾಮ, ಪಂಚಾಯತ್ ಹೆಸರು, ಲಿಂಗ ಜಾತಿ ಹೀಗೆ ಉಪಕರಣ ಪಡೆಯಲು ಇಚ್ಚಿಸುವ ವ್ಯಕ್ತಿ ಮೊಬೈಲ್ ನಂಬರ್, ಈ ಮೇಲ್ ವಿಳಾಸ, ಮತ್ತು ಅರ್ಜಿದಾರರ ಹೆಸರು,ನಿಮ್ಮ
ಮನೆಯ ವಿಳಾಸ,ಹಾಗೆ ಗ್ರಾಮ ಪಂಚಾಯಿತಿ ವಿಳಾಸ, ಪಿನ್ ಕೋಡ್ ,ವಿದ್ಯಾರ್ಹತೆ, ವಾರ್ಷಿಕ ಆದಾಯ, ಇವುಗಳನ್ನೆಲ್ಲ ನೀವು ಭರ್ತಿ ಮಾಡಬೇಕಾಗುತ್ತೆ.
ಹಾಗೆ ನಂತರ ಕೆಳಗೆ ತಾವು ವಿಕಲಚೇತನರಾಗಿದ್ದೀರಾ ಹೌದು ಅಥವಾ ಇಲ್ಲ ಅಂತ ಕೇಳುತ್ತೆ ಅವುಗಳನ್ನೆಲ್ಲ ನೀವು ಸರಿಯಾಗಿ ಭರ್ತಿ ಮಾಡಬೇಕಾಗುತ್ತೆ.
ನಂತರ ಅಲ್ಲಿ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ನಂತರ save Annexure ಮೇಲೆ ಕ್ಲಿಕ್ ಮಾಡಿ.
ಕೊನೆಗೆ ನಿಮ್ಮ ಅಪ್ಲಿಕೇಶನ್ ಸಲ್ಲಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಕಾಪಿಯನ್ನು ಡೌನ್ಲೋಡ್ ಮಾಡಿಕೊಳ್ಳಿ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: ದಿನಾಂಕ 30/ 09/2025
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30/ 11/2025
ಪ್ರಮುಖ ಲಿಂಕ್ಗಳು
Application: ಇಲ್ಲಿ ಕ್ಲಿಕ್ ಮಾಡಿ
ತೀರ್ಮಾನ :
ಈ ಯೋಜನೆಗೆಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಅದರ ಜೊತೆಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತಿಸಿ ಅರ್ಜಿ ಸಲ್ಲಿಸಲು 30/ 11/2025 ಕೊನೆಯ ದಿನಾಂಕವಾಗಿದೆ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.