ದೀಪಿಕಾ ವಿದ್ಯಾರ್ಥಿವೇತನ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ರೂ.30,000/-ಸ್ಕಾಲರ್‌ಶಿಪ್‌! | Deepika Scholarship Scheme

ರಾಜ್ಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪ್ರಾರಂಭಿಸಲು ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಿದ್ದಾರೆ 2025 26ನೇ ಸಾಲಿನ ವಿದ್ಯಾರ್ಥಿ ವೇತನ ಇದಾಗಿದ್ದು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಅನ್ವಯವಾಗಲಿದೆ. ವರ್ಷಕ್ಕೆ ರೂ.30,000 ವಿದ್ಯಾರ್ಥಿ ವೇತನ ನೀಡುವ ಯೋಜನೆ ಇದಾಗಿದ್ದು ವಿದ್ಯಾರ್ಥಿಗಳು ಇದಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಇದರ ಕುರಿತು ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೀಡಲಾಗಿದೆ.

Deepika Scholarship Scheme

ವಿದ್ಯಾರ್ಥಿ ವೇತನದ ಉದ್ದೇಶ

    • ಗ್ರಾಮೀಣ ಪ್ರದೇಶಗಳು ಸೇರಿದಂತೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದೀಪಿಕಾ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಲಾಗಿದೆ.
    • ವಿದ್ಯಾರ್ಥಿನಿಯರು ಆರ್ಥಿಕ ಕೊರತೆಯಿಂದಾಗಿ ತಮ್ಮ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಒಂದು ಪ್ರಮುಖ ಉದ್ದೇಶದಿಂದ ಸರ್ಕಾರ ಇಂತಹ ಯೋಜನೆಯನ್ನು ಜಾರಿಗೆ ತಂದಿದೆ.
    • ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣವನ್ನು ಪಡೆಯಬೇಕು ಎನ್ನುವ ಉದ್ದೇಶ ಇದಾಗಿದೆ.

ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ

10 ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು

    • ಶಾಲಾ ದಾಖಲಾತಿ ಪ್ರಮಾಣ ಪತ್ರ
    • ಆಧಾರ್ ಕಾರ್ಡ್
    • ಬ್ಯಾಂಕ್ ಖಾತೆ ವಿವರ
    • ಆದಾಯ ಮತ್ತು ಜಾತಿ ಪ್ರಮಾಣ ಪತ್ರ

ಇನ್ನಿತರ ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸಬೇಕು

ವಿದ್ಯಾರ್ಥಿ ವೇತನದ ಹಂಚಿಕೆ

  • ಆಯ್ಕೆಯಾದ ವಿದ್ಯಾರ್ಥಿನಿಯರ ಬ್ಯಾಂಕ್ ಖಾತೆಗೆ ನೇರವಾಗಿ ವಿದ್ಯಾರ್ಥಿ ವೇತನ ಸಂದಾಯವಾಗುತ್ತೆ
  • ವಿದ್ಯಾರ್ಥಿ ವೇತನ ಹಣವನ್ನ ವಿದ್ಯಾರ್ಥಿನಿಯರ ಶಿಕ್ಷಣ ಖರ್ಚುಗಳಿಗಾಗಿ ಬಳಸಿಕೊಳ್ಳಬಹುದು

ವಿದ್ಯಾರ್ಥಿ ವೇತನದ ಮೊತ್ತ

    • ರಾಜ್ಯದ 37 ಸಾವಿರ ವಿದ್ಯಾರ್ಥಿನಿಯರು ಈ ಯೋಜನೆಗೆ ಈ ಯೋಜನೆಯ ಲಾಭವನ್ನು ಪಡೆಯಬಹುದು
    • ವರ್ಷಕ್ಕೆ 30 ಸಾವಿರದ ಅಂದಾಜಿನಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತೆ.
    • ಪದವಿ ಶಿಕ್ಷಣ ಪೂರ್ಣವಾಗುವವರೆಗೆ ಪ್ರತಿವರ್ಷ 30,000 ವಿದ್ಯಾರ್ಥಿ ವೇತನ ನೀಡಲಾಗುತ್ತೆ

ಅರ್ಜಿ ಸಲ್ಲಿಸುವ ವಿಧಾನ

  • ವಿದ್ಯಾರ್ಥಿನಿಯರು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
  • ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  • ಅಂತಿಮವಾಗಿ ಪ್ರಿಂಟ್ ಔಟ್ ಅನ್ನು ತೆಗೆದಿಟ್ಟುಕೊಂಡು

ಅರ್ಜಿ ಸಲ್ಲಿಸುವ ಲಿಂಕುಗಳು

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

ಅಪ್ಪ್ಲಿಕೆಶನ್ ಲಿಂಕ್

ಅಂತಿಮ ತೀರ್ಮಾನ

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದಲ್ಲಿ ಮುಂದುವರಿಯಲು ಕರ್ನಾಟಕ ಸರ್ಕಾರ ಮತ್ತು ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನೀಡಲಾಗುತ್ತಿರುವ ವಿದ್ಯಾರ್ಥಿವೇತನ ಇದಾಗಿದ್ದು  ಉನ್ನತ ಶಿಕ್ಷಣ ಮುಗಿಯುವವರೆಗೆ ವರ್ಷಕ್ಕೆ ರೂ.30,000 ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತೆ.

Leave a Reply

Your email address will not be published. Required fields are marked *