ಸರ್ಕಾರದ ವತಿಯಿಂದ ಚಾಫ್ ಕಟ್ಟರ್ ಮಷೀನ್ ಹಾಗೂ ಕೌ ಮ್ಯಾಟ್ ಸಬ್ಸಿಡಿ ದರದಲ್ಲಿ ಕೊಡುತ್ತಿದ್ದಾರೆ ನೀವು ರೈತರಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ, ಈ ಸಬ್ಸಿಡಿ ಯೋಜನೆಯ ಲಾಭವನ್ನು ಪಡೆಯಬಹುದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಈ ಕೆಳಗೆ ನೀಡಲಾಗಿದ್ದು ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಉದ್ದೇಶ
- ರೈತರಿಗೆ ಕಡಿಮೆ ಬೆಲೆಯಲ್ಲಿ ಚಾಫ್ ಕಟರ್ ಮಷೀನ್ ವಿತರಣೆ ಮಾಡಿ ದನಕರುಗಳಿಗೆ ಕತ್ತರಿಸಲು ಸಹಾಯ ಮಾಡುವುದು ಕತ್ತರಿಸಿ ಹಾಕಲು ಸಹಾಯ ಮಾಡುವುದು ಅದಾದ ನಂತರ ಇದರ ಜೊತೆಗೆ ಧನದ ಮ್ಯಾಟ್ ದನದ ಕೊಟ್ಟಿಗೆ ಹಾಕಲು ಮ್ಯಾಟ್ ಅನ್ನು ವಿತರಣೆ ಮಾಡುತ್ತಿರುವಂಥದ್ದು ಇವೆಲ್ಲವೂ ಕೂಡ 40% ಅಷ್ಟು ಸಿಗುತ್ತಾ ಇರುವಂತದ್ದು.
ಯೋಜನೆಗೆ ಅರ್ಹತೆ
ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಅಥವಾ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಯಾಗಿದ್ದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಸಮಾಜ ಕಲ್ಯಾಣ ಇಲಾಖೆಯ ಅಂಗವಾದ ಅನುಸೂಚಿತ ಜಾತಿ ವರ್ಗದ ನಿಯಮಗಳ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ
ಈ ಮೊದಲು ಸರ್ಕಾರದಿಂದ ಯಾವುದೇ ಸಹಾಯಧನ ಅಥವಾ ಪ್ರಯೋಜನವನ್ನು ಪಡೆದಿರಬಾರದು
ಅವರ ಕುಟುಂಬದ ಸದಸ್ಯರು ಸರ್ಕಾರಿ ಅಥವಾ ಅರೆ ಸರಕಾರಿ ನೌಕರರಿಗೆ ನೌಕರಿಯಲ್ಲಿ ಇರಬಾರದು
ಸಬ್ಸಿಡಿ ಸಿಗುವ ವಸ್ತುಗಳು
ದನದ ಮ್ಯಾಟ್
ಚಾಫ್ ಕಟರ್ ಮಷಿನ್
ಯೋಜನೆಯ ಮೊತ್ತ
ಸಹಾಯಧನ ಎರಡು ಹಸು ಹೆಮ್ಮೆ ಖರೀದಿಗೆ ಗರಿಷ್ಠ 1.25 ಲಕ್ಷ ಅಥವಾ ಒಟ್ಟು ವೆಚ್ಚದ 50% ಎರಡರಲ್ಲಿ ಯಾವುದು ಕಡಿಮೆ ಅದನ್ನ ನೀಡಲಾಗುತ್ತೆ
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ವಾಸ ಸ್ಥಳ ದೃಡೀಕರಣ
- ಪತ್ರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ವ್ಯವಸಾಯ ಜಮೀನು ದಾಖಲೆ
- ಪಶು ಪಾಲನೆಯಿಂದ ಶಿಫಾರಸು ಪತ್ರ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿಯನ್ನು ಸಲ್ಲಿಸಲು ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ
ಸೇವಾಸಿಂದು ಪೋರ್ಟಲ್ಲಿಗೆ ಭೇಟಿ ನೀಡಿ ಅಪ್ಲಿಕೇಶನ್ ನನ್ನ ಓಪನ್ ಮಾಡಿ
ಅಲ್ಲಿ ಕೆಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ
ನಿಮ್ಮ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಥವಾ ಪಶು ಪಾಲನೆ ಇಲಾಖೆಯ ಕಚೇರಿಗೆ ಸಂಪರ್ಕಿಸಿ
ಲಿಂಕ್ :- https://swd.karnataka.gov.in/