Azim Premji Scholarship : ಅಜೀಂ ಪ್ರೇಮ್ ಜಿ ವಿದ್ಯಾರ್ಥಿ ವೇತನ ಹೆಣ್ಣುಮಕ್ಕಳಿಗೆ 30000 ವಿದ್ಯಾರ್ಥಿ ವೇತನವನ್ನ ಅಜೀಮ್ ಪ್ರೇಮ್ ಜಿ ಸಂಸ್ಥೆಯಿಂದ ನೀಡಲಾಗುತ್ತಿದ್ದು ಈ ವಿದ್ಯಾರ್ಥಿ ವೇತನಕ್ಕೆ ಅರ್ಹತೆ, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ಅರ್ಜಿ ಸಲ್ಲಿಸಲು ದಿನಾಂಕ, ಹಾಗೆ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದ್ದು ಈ ಲೇಖನವನ್ನ ಪೂರ್ತಿಯಾಗಿ ಕೊನೆಯ ತನಕ ಓದಿ ಹಾಗೂ ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ.
ಈ ವಿದ್ಯಾರ್ಥಿ ವೇತನದ ಉದ್ದೇಶ
ಹಿಂದುಳಿದ ಹಾಗೂ ಬಡ ವಿದ್ಯಾರ್ಥಿನಿಯರ ಪದವಿ ಶಿಕ್ಷಣವನ್ನು ಪೂರೈಸಲು ಅಜಿಮ್ ಪ್ರೇಮ್ ಜಿ ಸಂಸ್ಥೆಯಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು ಈ ಒಂದು ವಿದ್ಯಾರ್ಥಿ ವೇತನ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣವನ್ನ ಪಡೆಯಲು ಸಹಾಯವಾಗಲೆಂದು ನೀಡಲಾಗುತ್ತಿದೆ ಇದರ ಸದುಪಯೋಗವನ್ನ ವಿದ್ಯಾರ್ಥಿನಿಯರು ಪಡೆದುಕೊಳ್ಳಬಹುದು.
ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹತೆ
ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಹಾಕಬೇಕಾದರೆ ಕೆಲವೊಂದಿಷ್ಟು ಅರ್ಹತೆಗಳು ವಿದ್ಯಾರ್ಥಿನಿಯರಲ್ಲಿ ಇರಬೇಕಾಗುತ್ತದೆ ಅದು ಏನು ಅಂತ ಈ ಕೆಳಗೆ ನೋಡೋಣ ಬನ್ನಿ.
10 ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಪಾಸ್ ಆಗಿರಬೇಕಾಗುತ್ತದೆ
ಪ್ರಸ್ತುತ ಅಕಾಡೆಮಿಕ್ ವರ್ಷ ಮೊದಲ ವರ್ಷದಲ್ಲಿ ಪದವಿಯನ್ನು ಅಥವಾ ಡಿಪ್ಲೋಮಾ ಕೋರ್ಸ್ಗಾಗಿ ಪ್ರವೇಶ ಪಡೆದಿರಬೇಕಾಗುತ್ತದೆ
ಪ್ರವೇಶ ಪಡೆದ ಕಾಲೇಜು ವಿಶ್ವವಿದ್ಯಾನಿಲಯ ಸರಕಾರದ ಅಥವಾ ಖಾಸಗಿ ಸಂಸ್ಥೆ ಆಗಿರಬೇಕು
ಅರ್ಹ ರಾಜ್ಯಗಳು ಅಥವಾ ಯೂನಿವರ್ಸಿಟಿ ಟೆರಿಟರಿಗಳು
ಅರುಣಚಲ ಪ್ರದೇಶ, ಅಸ್ಸಾಂ ,ಬಿಹಾರ್ , ಜಾರ್ಖಂಡ್ ,ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಒಡಿಶಾ, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ ,ತ್ರಿಪುರ, ಉತ್ತರ ಪ್ರದೇಶ, ಮತ್ತು ಉತ್ತರಕಾಂಡ ರಾಜ್ಯಗಳ ವಿದ್ಯಾರ್ಥಿನಿಯರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನು ಓದಿರಿ :-ಗ್ರಾಮ ಪಂಚಾಯಿತಿ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
ವಿದ್ಯಾರ್ಥಿ ವೇತನದ ಮೊತ್ತದ ವಿವರ
ವಿದ್ಯಾರ್ಥಿನಿಯರಿಗೆ ವರ್ಷಕ್ಕೆ ರೂ.30,000
ಮೊದಲ ಡಿಗ್ರಿ ಅಥವಾ ಡಿಪ್ಲೋಮಾ ಕೋರ್ಸ್ 2ರಿಂದ 5 ವರ್ಷಗಳವರೆಗೆ ನೀಡಲಾಗುತ್ತದೆ
ಹುಡುಗಿಯರಿಗೆ ಮಾತ್ರ ಈ ಒಂದು ವಿದ್ಯಾರ್ಥಿ ವೇತನ ಆಗಿದೆ
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಪಾಸ್ಪೋರ್ಟ್ ಫೋಟೋ
- ಬಿಳಿ ಹಾಳೆಯಲ್ಲಿ ಸಿಗ್ನೇಚರ್
- ಆಧಾರ್ ಕಾರ್ಡ್
- ಹತ್ತನೇ ತರಗತಿ ಅಂಕಪಟ್ಟಿ
- 12ನೇ ತರಗತಿ ಅಂಕಪಟ್ಟಿ
- ಕಾಲೇಜು ಪ್ರವೇಶ ಪಡೆದ ರಿಜುವತು ಇನ್ನಿತರ ಪ್ರಮುಖ ದಾಖಲೆಗಳನ್ನು ಆನ್ಲೈನಲ್ಲಿ ಅಪ್ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳಲಾಗಿ ಇರುವ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ಅಗತ್ಯ ಧಾಗಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಇದನ್ನು ಓದಿರಿ :-ಕಾರ್ಮಿಕ ಕಾರ್ಡ್ ಇದ್ರೆ ಉಚಿತ ಟೂಲ್ ಕಿಟ್! ಸರ್ಕಾರದಿಂದ ಘೋಷಣೆ