
ಪ್ರತಿಯೊಬ್ಬ ರೈತನಿಗೂ ಸೋಲಾರ್ ಬೇಲಿಯನ್ನು ನಿರ್ಮಾಣ ಮಾಡಿಕೊಳ್ಳಲು 125000 ನೆರವನ್ನು ನೀಡಲಾಗುತ್ತಿದೆ ರೈತರು ಈ ಒಂದು ಸಹಾಯಧನವನ್ನು ಪಡೆದು ತಮ್ಮ ಜಮೀನಿಗೆ ಸೋಲಾರ್ ಬೇಲಿಯನ್ನ ನಿರ್ಮಾಣ ಮಾಡಿಕೊಳ್ಳಬಹುದು. ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ರೈತರು ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಯೋಜನೆಯ ಉದ್ದೇಶ
ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ರೈತರಿಗೆ ತಮ್ಮ ಜಮೀನಿಗೆ ಬೇಲಿಯನ್ನು ನಿರ್ಮಾಣ ಮಾಡಿಕೊಳ್ಳಲು ಹಣಕಾಸಿನ ನೆರವನ್ನು ನೀಡಲಾಗುತ್ತಿದೆ ಈ ಹಣಕಾಸಿನ ನೆರವನ್ನ ಸೋಲಾರ್ ಬೇಲಿ ನಿರ್ಮಾಣ ಮಾಡಲು ಬಳಸಿಕೊಳ್ಳಬಹುದು ರೈತರಿಗೆ ಇದೊಂದು ಉತ್ತಮ ಯೋಜನೆ ಯಾಗಿದ್ದು ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ರೈತರು ಅರ್ಜಿಯನ್ನು ಸಲ್ಲಿಸಬಹುದು.
ಸಾಕಷ್ಟು ಜನ ರೈತರಿಗೆ ಜಮೀನು ಇರುತ್ತದೆ ಆದರೆ ಇರುವಂತ ಜಮೀನಿನಲ್ಲಿ ಬೆಳೆಯನ್ನ ಬೆಳೆದು ಆ ಬೆಳೆಯನ್ನ ರಕ್ಷಣೆ ಮಾಡಿಕೊಳ್ಳಲು ಸೂಕ್ತವಾದ ಬೇಲಿಯನ್ನ ನಿರ್ಮಾಣ ಮಾಡಿಕೊಳ್ಳಲು ಹಣ ಇಲ್ಲದೆ ಒದ್ದಾಡುತ್ತಿರುತ್ತಾರೆ.
ಒಂದು ಕಡೆ ಕಾಡಿನಲ್ಲಿ ಸಿಗುವ ಮುಳ್ಳುಗಳನ್ನ ಬಳಸಿಕೊಂಡು ಬೇಲಿ ನಿರ್ಮಾಣ ಮಾಡಿದರೆ ಆ ಬೇಲಿ ಶಾಶ್ವತವಾಗಿ ಇರುವುದಿಲ್ಲ ಇದರಲ್ಲಿ ಕಾಡಿನ ಪ್ರಾಣಿ ಪಕ್ಷಿಗಳು ಸೇರಿದಂತೆ ಹಾಗೂ ದನ ಕರುಗಳ ಕಾಟದಿಂದ ಬೆಳೆಯನ್ನ ರಕ್ಷಣೆ ಮಾಡಿಕೊಳ್ಳಲು ರೈತ ಹರಸಾಹಸ ಪಡುತ್ತಿರುತ್ತಾನೆ.
ಆದರೆ ಎಷ್ಟೇ ಕಷ್ಟಪಟ್ಟರು ತಾನು ಬೆಳೆದಂತ ಬೆಳೆಯನ್ನ ರಕ್ಷಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ರೈತ ಅನುಭವಿಸುತ್ತಿರುತ್ತಾನೆ. ಇದನ್ನ ಗಮನಹರಿಸಿದ ಸರ್ಕಾರ ಇದೀಗ ಇಂತಹ ಸಂಕಷ್ಟ ರೈತರಿಗೆ ಬರಬಾರದು ಎಂದು ಸೋಲಾರ್ ಬೇಲಿ ನಿರ್ಮಾಣ ಮಾಡಲು ಈ ಯೋಜನೆಯನ್ನು ಜಾರಿಗೆ ತಂದಿದೆ.
ಸೋಲಾರ್ ಬೇಲಿ ಸಬ್ಸಿಡಿ ಯೋಜನೆ
ಸೋಲಾರ್ ಬೇಲಿ ಸಬ್ಸಿಡಿ ಯೋಜನೆಯನ್ನು ಪಡೆಯಲು ಹಲವಾರು ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಬೇಲಿ ಕಂಬ ಮತ್ತು ಒಂದು ಲಕ್ಷದ ಇಪ್ಪತ್ತೈದು ಸಾವಿರದವರೆಗೆ ಸಹಾಯಧನವನ್ನು ನೀಡಲಾಗುತ್ತಿದ್ದು ಅದರ ವಿವರಣೆ ಈ ಕೆಳಗೆ ಇದೆ ಯೋಜನೆಯ ಉದ್ದೇಶ ವನ್ಯ ಪ್ರಾಣಿಗಳ ಹಾವಳಿಯಿಂದ ಕೃಷಿ ಭೂಮಿಯನ್ನು ರಕ್ಷಿಸಲು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ ಅದರ ಜೊತೆಗೆ ಸೋಲಾರ್ ಬೇಲಿ ಸಬ್ಸಿಡಿ ಯೋಜನೆಯಿಂದ ಧನಕರುಗಳನ್ನ ರಕ್ಷಣೆ ಮಾಡಲು ದನಕರುಗಳಿಂದ ಬೆಳೆಗಳನ್ನು ರಕ್ಷಣೆ ಮಾಡಲು ಸಹಾಯವಾಗುತ್ತೆ.
ಅರ್ಹತೆ
ಕನಿಷ್ಠ ಒಂದು ಎಕರೆ ಜಮೀನು ಹೊಂದಿರುವ ಪ್ರತಿಯೊಬ್ಬ ರೈತರು ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
ಈ ಕೆಳಗೆ ಕೊಟ್ಟಿರುವ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಹಾಕಬಹುದು ಪ್ರಮುಖ ದಾಖಲೆಗಳ ಬಗ್ಗೆ ಕೆಳಗೆ ಮಾಹಿತಿಯನ್ನು ನೀಡಲಾಗಿದೆ
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಪಹಣಿ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ರೇಷನ್ ಕಾರ್ಡ್
ಹೀಗೆ ಸಂಬಂಧಿಸಿದ ಇನ್ನಿತರ ಹಲವಾರು ದಾಖಲೆಗಳು
ಅರ್ಜಿ ಸಲ್ಲಿಸಿಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
- ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
- ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಪ್ರಿಂಟ್ ಔಟ್ ಮಾಡಿಟ್ಟುಕೊಳ್ಳಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ : https://raitamitra.karnataka.gov.in/en