
ನಮಸ್ಕಾರ ಸ್ನೇಹಿತರೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಇಲ್ಲಿ ಖಾಲಿ ವಿವಿಧ ಹುದ್ದೆಗಳ ಬರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಒಟ್ಟು 63 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ,ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಹೀಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಈ ಮಾಹಿತಿಯನ್ನು ಪೂರ್ತಿಯಾಗಿ ಕೊನೆತನಕ ಓದಿ.
- ನೇಮಕಾತಿ ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ಹುದ್ದೆಯ ಹೆಸರು :
ಸಹಾಯಕ ಲೆಕ್ಕಿಗ
ನಿರ್ವಾಹಕ
- ಒಟ್ಟು ಹುದ್ದೆಗಳು : 63
- ಉದ್ಯೋಗ ಸ್ಥಳ : ಕಲ್ಯಾಣ ಕರ್ನಾಟಕ
ಸಂಕ್ಷಿಪ್ತ ಮಾಹಿತಿ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಒಟ್ಟು 63 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗಳಿಗೆ ಸಂಬಂಧಪಟ್ಟಂತ ಎಲ್ಲ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ
ಸಹಾಯಕ ಲೆಕ್ಕಿಗ – 03
ನಿರ್ವಾಹಕ -60
ವಿದ್ಯಾರ್ಹತೆ
- ದ್ವಿತೀಯ ಪಿಯುಸಿ ಅಥವಾ ತತ್ಸಮಾನ
- ಬಿ ಕಾಮ್ ಪದವಿ
ಅರ್ಜಿ ಶುಲ್ಕ
ಅರ್ಜಿ ಶುಲ್ಕದ ಬಗ್ಗೆ ಅಧಿಕೃತ ಅಧಿಸೂಚನೆಯಲ್ಲಿ ಕೆಲವೇ ದಿನಗಳಲ್ಲಿ ಮಾಹಿತಿಯನ್ನು ತಿಳಿಸಲಾಗುತ್ತದೆ
ಕೇಂದ್ರ ಸರ್ಕಾರಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ಖಾಸಗಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ಯೋಜನೆಗಳು ಇಲ್ಲಿ ಕ್ಲಿಕ್ ಮಾಡಿ
ಅಗತ್ಯ ದಾಖಲೆಗಳು
- ಶೈಕ್ಷಣಿಕ ಪ್ರಮಾಣ ಪತ್ರ
- ಜನ್ಮ ದಿನಾಂಕ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಿಕಲಾಂಗತ್ವ ಪ್ರಮಾಣ ಪತ್ರ
- ಐಡಿ ಪ್ರೂಫ್
- ಪಾಸ್ಪೋರ್ಟ್ ಫೋಟೋ
ಇನ್ನಿತರ ಸಂಬಂಧಿಸಿದ ಅಗತ್ಯ ದಾಖಲೆಗಳು
ವೇತನ ಶ್ರೇಣಿ
ಸಹಾಯಕ ಲೆಕ್ಕಿಗ – 23990-42800
ನಿರ್ವಾಹಕ – 18660-25300
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ದಾಖಲೆ ಪರಿಶೀಲನೆ
- ಸಂದರ್ಶನ
ವಯೋಮಿತಿ ವಿವರ
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು
ಕನಿಷ್ಠ 18 ವರ್ಷಗಳು ತುಂಬಿರತಕ್ಕದ್ದು ಹಾಗೂ ಈ ಕೆಳಕಂಡ
ಗರಿಷ್ಟ ವಯೋಮಿತಿಯನ್ನು ಮೀರಿರಬಾರದು
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 38 ವರ್ಷಗಳು
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 41 ವರ್ಷಗಳು
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷಗಳು
ವಯೋಮಿತಿ ಸಡಿಲಿಕೆ
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 262 ಸೇನೆನಿ 2025 ದಿನಾಂಕ 29.09.2025 ರಲ್ಲಿ ನಿರ್ದೇಶಿಸಿರುವಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಸಲ್ಲಿಸುವ ಕ್ರಮ :
- ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನಲ್ಲಿ ತೋರಿಸುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು.
- ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ / ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.
- ಅಭ್ಯರ್ಥಿಗಳು ಎಚ್ಚರಿಕೆಯಿಂದ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
- ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ, ಒಂದೇ ಅರ್ಜಿಯಲ್ಲಿ ಹುದ್ದೆಗಳನ್ನು ಆಯ್ಕೆ ಮಾಡಿ ಸಲ್ಲಿಸಬೇಕು.
ಪರೀಕ್ಷಾ ಕೇಂದ್ರಗಳ ಮಾಹಿತಿ
ಬೆಂಗಳೂರು, ಮೈಸೂರು, ದಾವಣಗೆರೆ, ದಕ್ಷಿಣ ಕನ್ನಡ, ಶಿವಮೊಗ್ಗ, ಬೆಳಗಾವಿ, ಧಾರವಾಡ,
ಬಳ್ಳಾರಿ, ಕೊಪ್ಪಳ, ವಿಜಯಪುರ, ತುಮಕೂರು ಮತ್ತು ಕಲಬುರ್ಗಿ ಕೇಂದ್ರಗಳಲ್ಲಿ ನಡೆಸಲಾಗುವುದು.
(ಆಡಳಿತಾತ್ಮಕ ಉದ್ದೇಶದಿಂದ ಜಿಲ್ಲಾ ಪರೀಕ್ಷಾ ಕೇಂದ್ರಗಳು ಬದಲಾವಣೆಯ ಷರತ್ತಿಗೆ ಒಳಪಟ್ಟಿರುತ್ತದೆ) ಅಭ್ಯರ್ಥಿಗಳಿಗೆ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪ್ರಾಧಿಕಾರದ ವೆಬ್ಸೈಟ್ನಿಂದ ಡೌನ್ ಲೋಡ್ ಮಾಡಿಕೊಳ್ಳಲು ಪ್ರಕಟಣೆಯ ಮೂಲಕ ತಿಳಿಸಲಾಗುವುದು ಹಾಗೂ ಈ ಬಗ್ಗೆ ಮಾಹಿತಿಯನ್ನು ಪ್ರಾಧಿಕಾರದ ವೆಬ್ ಸೈಟ್ ನಲ್ಲಿಯೂ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಒಂದು ಮೂಲ ಗುರುತಿನ ಚೀಟಿಯೊಂದಿಗೆ (ಪ್ಯಾನ್ ಕಾರ್ಡ್ /ವಾಹನ ಚಾಲನಾ ಪರವಾನಗಿ / ಆಧಾರ್ ಕಾರ್ಡ್ / ಪಾಸ್ಪೋರ್ಟ್ / ವೋಟರ್ ಐಡಿ/ ಸರ್ಕಾರಿ ನೌಕರರ ಐಡಿ) ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕು. ತಪ್ಪಿದ್ದಲ್ಲಿ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ನಿರೀಕ್ಷಿಸಿ ..
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನಿರೀಕ್ಷಿಸಿ ..
- ಶುಲ್ಕ ಪಾವತಿಸಲು ಕೊನೆಯ ದಿನಾಂಕ – ನಿರೀಕ್ಷಿಸಿ ..
ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು – ಇಲ್ಲಿ ಕ್ಲಿಕ್ ಮಾಡಿ
ತೀರ್ಮಾನ :
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ಅದರ ಒಂದು ಪ್ರತಿಯನ್ನು ಡೌನ್ ಲೋಡ್ ಮಾಡಿಕೊಂಡು ಮತ್ತು ಶುಲ್ಕ ಪಾವತಿಯ ಚಲನ್ ಅನ್ನು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಕಾಯ್ದಿಟ್ಟುಕೊಳ್ಳತಕ್ಕದ್ದು. ನಂತರ ಯಾವುದೇ ಹಂತದಲ್ಲಿ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಲ್ಲಿ ಅರ್ಜಿ ಪ್ರತಿಯನ್ನು ನೀಡಲಾಗುವುದಿಲ್ಲ.