
ಹೊಸದಾಗಿ ಅಂತರ್ಜಾತಿ ವಿವಾಹವಾದ ಗಂಡು ಮತ್ತು ಹೆಣ್ಣಿಗೆ ಹಾರ್ದಿಕ ಸಹಾಯಧನವನ್ನು ಕೊಡಲು ಸರ್ಕಾರ ಮುಂದಾಗಿದ್ದು ಗಂಡಿಗೆ ಎರಡುವರೆ ಲಕ್ಷ ಹೆಣ್ಣಿಗೆ ಮೂರು ಲಕ್ಷದವರೆಗೆ ಈ ಸಹಾಯಧನ ಸಿಗಲಿದೆ ಇದಕ್ಕೆ ಅರ್ಜಿಯನ್ನ ಎಲ್ಲರೂ ಸಹ ಸಲ್ಲಿಸಬಹುದು ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ.
ಯೋಜನೆಯ ಉದ್ದೇಶ
ಆರ್ಥಿಕವಾಗಿ ಹಿಂದುಳಿದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮದುವೆ ವೆಚ್ಚವನ್ನು ಬರೆಸುವ ಸರ್ಕಾರದ ಉದ್ದೇಶ ಮದುವೆಯ ವಸ್ತುಗಳನ್ನು ಖರೀದಿ ಮಾಡಲು ಆರ್ಥಿಕ ಸಹಾಯ
ಅರ್ಜಿ ಸಲ್ಲಿಸಲು ಕ್ರಮಗಳು
ಈ ಕೆಳಗೆ ಕೊಟ್ಟಿರುವ ವಿವಿಧ ಹಂತಗಳ ಆಧಾರದ ಮೇಲೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
ಅರ್ಹತೆ :-
- ಮದುವೆಯಾಗುವ ವ್ಯಕ್ತಿಗಳಿಗೆ ಇದು ಮೊದಲನೇ ಮದುವೆಯಾಗಿರಬೇಕು.
- ಅಂತರ್ಜಾತಿ ವಿವಾಹವಾಗಿರಬೇಕು.
- ಕಾನೂನು ಬದ್ಧವಾಗಿ ವಿವಾಹವಾಗಿರಬೇಕು.
- ಮದುವೆಯಾದ ಜೋಡಿಗಳು ಮದುವೆಯಾದ ಒಂದು ವರ್ಷದ ಒಳಗೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು.
- ಮದುವೆಯಾದ ದಂಪತಿಗಳ ವಾರ್ಷಿಕ ಆದಾಯವು 500000/- ಲಕ್ಷಕ್ಕಿಂತ ಹೆಚ್ಚಾಗಿರಬಾರದು.
ಅರ್ಜಿ ಸಲ್ಲಿಸುವ ಕ್ರಮ :-
- ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ swdservices.karnataka.gov.in/SWIncentive/ICM/ICMHome.aspx
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದರ ಸಂಖ್ಯೆ ಮತ್ತು ಸಂಗಾತಿಯ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೊಂದಾಯಿಸಿಕೊಳ್ಳಬೇಕು
- ಈ ಯೋಜನೆಗೆ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ.
- ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಸರಿಯಾಗಿ ಪರಿಶೀಲಿಸಿ ಸಬ್ಮಿಟ್ ಮಾಡಿ.
- ನಂತರ ವೈಯಕ್ತಿಕ ವಿವರಗಳು ಮದುವೆ ವಿವರಗಳು ವಧು ಮತ್ತು ವರನ ಬ್ಯಾಂಕ್ ಖಾತೆ ವಿವರ ಸಂಪರ್ಕ ವಿವರಗಳು ಫಾರಂನಲ್ಲಿ ಭರ್ತಿ ಮಾಡಬೇಕು.
- ಭವಿಷ್ಯದ ಉಲ್ಲೇಖಕ್ಕಾಗಿ ಒಂದು ಹಾಡು ಪ್ರತಿಯೊಂದು ತೆಗೆದಿಟ್ಟುಕೊಳ್ಳಿ
- ನಂತರ ಕರ್ನಾಟಕ ಅಂತರ್ಜಾತಿ ಮದುವೆ ಆರ್ಥಿಕ ಸಹಾಯಧನವನ್ನು ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ನೀವು ಕೊಟ್ಟಿರುವ ಬ್ಯಾಂಕ್ ಖಾತೆಗೆ ಅರ್ಧ ಹಣವನ್ನು ಜಮಾ ಮಾಡಲಾಗುತ್ತದೆ. ನುಳಿದ ಅರ್ಧ ಹಣವನ್ನು ಜಂಟಿ ಖಾತೆಯಲ್ಲಿ ಎಫ್ ಡಿ ಯಲ್ಲಿ ಇಡಲಾಗುತ್ತದೆ.
- ಕೊಟ್ಟಿರುವ ಸಂಪೂರ್ಣವಾದ ದಾಖಲೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಾರೆ.
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಈ ಕೆಳಗೆ ಕೊಟ್ಟಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಮದುವೆಯಾದ ಹೊಸ ಜೋಡಿಗಳು ಅದರಲ್ಲೂ ಅಂತರ್ಜಾತಿ ವಿವಾಹವಾದ ನವದು ವರರಿಗೆ ಈ ಹೊಸ ಯೋಜನೆ ಬಿಡುಗಡೆ ಮಾಡಲಾಗಿದೆ ಈ ಯೋಜನೆಯ ಆರ್ಥಿಕ ಲಾಭವನ್ನು ಪಡೆಯಲು ವಿವಿಧ ಹಂತಗಳನ್ನ ಫಾಲೋ ಮಾಡಿ ಹಾಗೂ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.