ಹಾಯ್ ಹಲೋ ನಮಸ್ಕಾರ ಸ್ನೇಹಿತರೇ,,,,, ಪ್ರತಿಯೊಬ್ಬರೂ ಸರ್ಕಾರದ ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿದುಕೊಳ್ಳಬೇಕು. ಇದೇ ನೋಡಿ ಕರ್ನಾಟಕ ಸರ್ಕಾರದ ಅಂತರ್ಜಾತಿ ವಿವಾಹ ಪ್ರೋತ್ಸಾಹ ನಿಧಿ ಯೋಜನೆ. ಕರ್ನಾಟಕ ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಯಲ್ಲಿ ಇದು ಒಂದು. ಇಂತಹ ಅನೇಕ ಯೋಜನೆಗಳನ್ನು ಸರ್ಕಾರ ಇನ್ನು ಜಾರಿ ತರಬೇಕಿದೆ. ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಮತ್ತು ವಿವಿಧ ಜಾತಿಗಳ ವ್ಯಕ್ತಿಗಳ ನಡುವಿನ ಮದುವೆಯನ್ನು ಉತ್ತೇಜಿಸಲು ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಈ ಯೋಜನೆಯನ್ನು ಸುಮಾರು ಅಂದ್ರೆ 2015 ರಿಂದ ಜಾರಿಗೊಳಿಸಲಾಗಿದೆ.
₹3 Lakh for Inter-Caste Marriages
ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಮತ್ತು ಯಾರೆಲ್ಲಾ ಈ ಯೋಜನೆಗೆ ಅರ್ಹರು ? ಈ ಯೋಜನೆ ಅಡಿಯಲ್ಲಿ ಎಷ್ಟು ಸಹಾಯಧನ ಸಿಗುತ್ತೆ ? ಪ್ರತಿಯೊಂದು ಹಂತ ಹಂತವಾಗಿ ಈ ಕೆಳಗೆ ನೀವು ತಿಳಿದುಕೊಳ್ಳಬಹುದು.
ಯೋಜನೆಯ ಹೆಸರು :-
ನಮ್ಮ ಕರ್ನಾಟಕ ಸರ್ಕಾರದ ಒಂದು ಉತ್ತಮ ಯೋಜನೆ ಅಂದರೆ ತಪ್ಪಾಗಲಾರದು.
- ಕರ್ನಾಟಕ ಸರ್ಕಾರದ ಅಂತರ್ಜಾತಿ ವಿವಾಹ ಪ್ರೋತ್ಸಾಹ ನಿಧಿ ಯೋಜನೆ.
ಸಹಾಯಧನದ ಮೊತ್ತ :-
- ನಮ್ಮ ಕರ್ನಾಟಕ ಸರ್ಕಾರವು ವರನಿಗೆ 2,50,000/- ಹಾಗೇನೆ ವಧುವಿಗೆ ವಿಧಗಳು 3,00,0000/. ಲಕ್ಷ ಆರ್ಥಿಕ ಸಹಾಯಧನವನ್ನು ನೀಡುತ್ತಾ ಬಂದಿದೆ.
- ಇಂತಹ ಸರ್ಕಾರದ ಯೋಜನೆಗಳ ಬಗ್ಗೆ ಇನ್ನೂ ಕೂಡ ಕೆಲವು ಜನಸಾಮಾನ್ಯರಿಗೆ ಗೊತ್ತೇ ಇಲ್ಲ..
ಪ್ರಯೋಜನಗಳು :-
- ಸಮಾಜದಲ್ಲಿ ಎಲ್ಲಾ ವರ್ಗದ ಜನರ ನಡುವೆ ಸಮಾನತೆ ಕಂಡುಬರುತ್ತದೆ
ಅಂತರ್ಜಾತಿ ವಿವಾಹವಾದ ಕುಟುಂಬಗಳಿಗೆ ಸರ್ಕಾರದಿಂದ ಬಹುದೊಡ್ಡ ಮಟ್ಟದಲ್ಲಿ ಸಹಾಯಧನ ಸಿಗುತ್ತೆ - ವಿವಾಹವಾದ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಅಥವಾ ಶಿಕ್ಷಣಕ್ಕೆ ಇನ್ನಿತರ ಖರ್ಚುಗಳಿಗೆ ಉಪಯೋಗವಾಗುತ್ತದೆ
- ಇಂತಹ ಯೋಜನೆಗಳಿಂದ ಸಮಾಜದಿಂದ ಬರುವ ವಿರೋಧದ ನಡುವೆಯೂ ಸರ್ಕಾರದ ಪ್ರೋತ್ಸಾಹ ಸಿಗುತ್ತದೆ
ಅರ್ಹತೆ :-
- ಅಂತರ್ಜಾತಿ ವಿವಾಹವಾಗಿರಬೇಕು.
- ಕಾನೂನು ಬದ್ಧವಾಗಿ ವಿವಾಹವಾಗಿರಬೇಕು.
- ಮದುವೆಯಾಗುವ ವ್ಯಕ್ತಿಗಳಿಗೆ ಇದು ಮೊದಲನೇ ಮದುವೆಯಾಗಿರಬೇಕು.
- ಮದುವೆಯಾದ ದಂಪತಿಗಳ ವಾರ್ಷಿಕ ಆದಾಯವು 500000/- ಲಕ್ಷಕ್ಕಿಂತ ಹೆಚ್ಚಾಗಿರಬಾರದು.
- ಮದುವೆಯಾದ ಜೋಡಿಗಳು ಮದುವೆಯಾದ ಒಂದು ವರ್ಷದ ಒಳಗೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು.
ಅಗತ್ಯವಾಗಿ ಬೇಕಾಗಿರುವ ಪ್ರಮುಖ ದಾಖಲೆಗಳು :-
- ಮದುವೆಯ ಪ್ರಮಾಣ ಪತ್ರ
- ಇಮೇಲ್ ಐಡಿ
- ಮೊಬೈಲ್ ನಂಬರ್
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ಜಾತಿ ಪ್ರಮಾಣ ಪತ್ರ
- ಕರ್ನಾಟಕದ ನಿವಾಸ
- ವಧು ಮತ್ತು ವರನ ಆಧಾರ್ ಕಾರ್ಡ್
ಅರ್ಜಿ ಸಲ್ಲಿಸುವ ಕ್ರಮ :-
- ಈ ಯೋಜನೆಗೆ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದರ ಸಂಖ್ಯೆ ಮತ್ತು ಸಂಗಾತಿಯ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೊಂದಾಯಿಸಿಕೊಳ್ಳಬೇಕು
- ನಂತರ ವೈಯಕ್ತಿಕ ವಿವರಗಳು ಮದುವೆ ವಿವರಗಳು ವಧು ಮತ್ತು ವರನ ಬ್ಯಾಂಕ್ ಖಾತೆ ವಿವರ ಸಂಪರ್ಕ ವಿವರಗಳು ಫಾರಂನಲ್ಲಿ ಭರ್ತಿ ಮಾಡಬೇಕು.
- ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಸರಿಯಾಗಿ ಪರಿಶೀಲಿಸಿ ಸಬ್ಮಿಟ್ ಮಾಡಿ.
- ಭವಿಷ್ಯದ ಉಲ್ಲೇಖಕ್ಕಾಗಿ ಒಂದು ಹಾಡು ಪ್ರತಿಯೊಂದು ತೆಗೆದಿಟ್ಟುಕೊಳ್ಳಿ
- ಕೊಟ್ಟಿರುವ ಸಂಪೂರ್ಣವಾದ ದಾಖಲೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಾರೆ.
- ನಂತರ ಕರ್ನಾಟಕ ಅಂತರ್ಜಾತಿ ಮದುವೆ ಆರ್ಥಿಕ ಸಹಾಯಧನವನ್ನು ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ನೀವು ಕೊಟ್ಟಿರುವ ಬ್ಯಾಂಕ್ ಖಾತೆಗೆ ಅರ್ಧ ಹಣವನ್ನು ಜಮಾ ಮಾಡಲಾಗುತ್ತದೆ. ನುಳಿದ ಅರ್ಧ ಹಣವನ್ನು ಜಂಟಿ ಖಾತೆಯಲ್ಲಿ ಎಫ್ ಡಿ ಯಲ್ಲಿ ಇಡಲಾಗುತ್ತದೆ.